ಗೌಪ್ಯನೀತಿ

ವೈಯಕ್ತಿಕ ಮಾಹಿತಿ

mBill ನಲ್ಲಿ ನೊಂದಾಯಿಸಿಕೊಳ್ಳುವಾಗ ನೀವು ನೀಡಿರುವ ನಿಮ್ಮ ಹೆಸರು ಮತ್ತು ಫೋನ್ ಸಂಖ್ಯೆ/ಇಮೇಲ್ ವಿಳಾಸಗಳನ್ನು ಕಾಲ ಕಾಲಕ್ಕೆ ಹೊಸ ಆಫರ್ ಗಳು, ಹೊಸ ಉತ್ಪನ್ನಗಳ ಬಿಡುಗಡೆ, ಗೌಪ್ಯನೀತಿ ಬದಲಾವಣೆಯ ಸಂದೇಶಗಳನ್ನು ರವಾನಿಸಲು ಬಳಸಿಕೊಳ್ಳಲಾಗುವುದು. ಯಾವುದೆ ಪ್ರಚಾರಕ್ಕಾಗಿ ಅಥವಾ ನಿಮ್ಮ ಅನುಮತಿಯಿಲ್ಲದೆ ಬೇರೆ ಇತರೆ ಬಳಕೆಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಲಾಗುವುದಿಲ್ಲ.

ಡೆಮೊ ಲಾಗಿನ್

mBill ಬಳಕೆದಾರರಿಗೆ ಅನುಕೂಲವಾಗುವಂತೆ ಡೆಮೊ ಲಾಗಿನ್ ಸೃಷ್ಟಿಸಲಾಗಿದೆ. ಡೆಮೊ ಲಾಗಿನ್ ನಲ್ಲಿರುವ ಮಾಹಿತಿಗಳನ್ನು ಇತರರು ಡೆಮೊ ಲಾಗಿನ್ ಬಳಸುವಾಗ ಕಾಣಬಹುದು. ಹಾಗಾಗಿ ನಿಮ್ಮ ವೈಯಕ್ತಿಕ ಹಾಗೂ ಸೂಕ್ಷ್ಮವಾದ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳಬಾರದೆಂದು ವಿನಂತಿಸುತ್ತೇವೆ. ಉದಾ. ಯಾವುದೇ ರೀತಿಯ ಫೈಲ್ಸ್ ಅಥವಾ ಸೂಕ್ಷ್ಮ ಡಾಕ್ಯೂಮೆಂಟ್ಸ್. ಡೆಮೊ ಲಾಗಿನ್ ನಲ್ಲಿರುವ ಮಾಹಿತಿ ಬಗ್ಗೆ mBill ಯವುದೇ ರೀತಿಯ ಗೌಪ್ಯತೆಯ ಖಾತರಿ ನೀಡುವುದಿಲ್ಲ.

ಬಳಕೆಯ ವಿವರಗಳು

ನಿಮ್ಮ ಬಳಕೆಯ ರೀತಿಗಳಾದ ಸಮಯ, ಎಷ್ಟು ಬಾರಿ ಬಳಸುವಿರಿ, ಬಳಕೆಯ ಕಾಲಾವಧಿ, ವಿಶೇಷತೆಗಳ ಬಳಕೆ ಮುಂತಾದವುಗಳ ಕುರಿತು ಮಾಹಿತಿ ಪಡೆಯಲು mBill ಸ್ಮಾರ್ಟ್ ಅನಾಲಿಟಿಕ್ಸ್ ಅನ್ನು ವೆಬ್ ತಾಣ/ಆಪ್ ನಲ್ಲಿ ಅಳವಡಿಸಿರುತ್ತದೆ. ಇದು ಕೇವಲ ಬಳಕೆಯ ಅನುಭವವನ್ನು ಇನ್ನಷ್ಟು ಸುಧಾರಿತ ಹಾಗೂ ಸರಳವಾಗಿ ಮಾಡುವ ಪ್ರಯತ್ನದಲ್ಲಿ ಅಳವಡಿಸಲಾಗಿರುತ್ತದೆ.

ನಿಮ್ಮ ಖಾತೆಯ ವಿವರಗಳು

ನಿಮ್ಮೆಲ್ಲ ಮಾಹಿತಿಗಳನ್ನು ಕ್ಲೌಡ್ ಸ್ಟೋರೇಜ್ ವ್ಯವಸ್ಥೆಯ ಸಂರಕ್ಷಿಸಿಟ್ಟಿರಲಾಗಿದ್ದು ಅದರ ಒಂದು ಪ್ರತಿಯು ಥರ್ಡ್ ಪಾರ್ಟಿ ಸ್ಟೋರೇಜ್ ನಲ್ಲಿ ಸಂರಕ್ಷಿಸಿರಲಾಗಿರುತ್ತದೆ. ಇದರಿಂದಾಗಿ ಯಾವುದೆ ಸಿಸ್ಟಮ್ ದೋಷಗಳುಂಟಾದಲ್ಲಿ ನಿಮ್ಮ ಮಾಹಿತಿ ಕಳೆದು ಹೋಗುವುದಿಲ್ಲ. ನಿಮ್ಮ ಖಾತೆ ನಿಷ್ಕ್ರೀಯಗೊಂಡಾಗಲೂ ಸಹ ನಿಮ್ಮ ಮಾಹಿತಿ ನಮ್ಮ ಸರ್ವರ್ ಗಳಲ್ಲಿ ಸುರಕ್ಷಿತವಾಗಿದ್ದು mBill ತಂಡ ಒಳಗೊಂಡಂತೆ ಇನ್ನ್ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ (ಡಾಕ್ಯೂಮೆಂಟ್ ಗಳಲ್ಲಿ ನಮೂದಿಸಲಾದ ಸಂದರ್ಭಗಳನ್ನು ಹೊರತುಪಡಿಸಿ).

ಭೇಟಿದಾರರ ವಿವರ

ನಮ್ಮ ವೆಬ್ ತಾಣಕ್ಕೆ ಭೇಟಿ ನೀಡುವವರ ಕೆಲ ವಿವರಗಳನ್ನು ನಾವು ಬಳಸುತ್ತೇವೆ. ಇದನ್ನು ಕೇವಲ ಬಳಕೆದಾರರ ವೆಬ್ ಅನುಭವ, ಅವರು ಯಾವ ರೀತಿ ಬಳಸಬಯಸುತ್ತಾರೆಂಬ ಲಕ್ಷಣ ತಿಳಿದು ನಮ್ಮ ತಾಣವನ್ನು ಮತ್ತಷ್ಟು ಸುಧಾರಿಸುವುದಷ್ಟೇ ಆಗಿರುತ್ತದೆ. ಇದು ಐಪಿ ವಿಳಾಸ, ಬ್ರೌಸರ್ ಭಾಷೆ, ಬ್ರೌಸರ್ ಪ್ರಕಾರ, ನೋಡಲಾದ ಫೈಲ್ ಗಳು, ಆಪರೇಟಿಂಗ್ ಸಿಸ್ಟಮ್ ಮುಂತಾದವುಗಳನ್ನು ಒಳಗೊಂಡಿರುತ್ತದೆ.

ಕುಕ್ಕೀಸ್ ಮತ್ತು ವಿಡ್ಜೆಟ್ಸ್

ನಮ್ಮ ವೆಬ್ ತಾಣವನ್ನು ಮತ್ತಷ್ಟು ಬಳಕೆದಾರ ಸ್ನೇಹಿ ಹಾಗೂ ಸುಧಾರಿಸಲು ನಾವು ಮೂರನೇ ಪಕ್ಷವನ್ನು ಈ ಕಾರ್ಯಕ್ಕಾಗಿ ಬಳಸಬಹುದು. ಮೂರನೇ ಪಕ್ಷವು ಈ ಕಾರ್ಯವನ್ನು ನಿರ್ವಹಿಸಲು ಕುಕ್ಕೀಸ್ ಗಳನ್ನು ಅಳವಡಿಸಬಹುದು. ಅಂತಹ ಕುಕ್ಕೀಸ್ ಗಳು ನಿಮ್ಮ ಮಾಹಿತಿಗಳೊಂದಿಗೆ ಯಾವ ರೀತಿಯ ಸಂಬಂಧವನ್ನು ಹೊಂದಿರುವುದಿಲ್ಲ ಹಾಗೂ mBill ಈ ಕುಕ್ಕೀಸ್ ಗಳೊಂದಿಗೆ ಯಾವ ಸಮ್ಪರ್ಕವೂ ಹೊಂದಿರುವುದಿಲ್ಲ ಮತ್ತು ಅದಕ್ಕಾಗಿ ಜವಾಬ್ದಾರಿಯೂ ಆಗಿರುವುದಿಲ್ಲ. mBill ಥರ್ಡ್ ಪಾರ್ಟಿ ವಿಡ್ಜೆಟ್ಸ್ ಗಳನ್ನು ವೆಬ್ ತಾಣದಲ್ಲಿ ಬೆಂಬಲಿಸುತ್ತದೆ. ಅಂತಹ ವಿಡ್ಜೆಟ್ ಗಳು ಬಳಕೆದಾರರ ಯಾವ ಮಾಹಿತಿಗಳನ್ನು ಪಡೆಯುವುದಿಲ್ಲ.

ನಮ್ಮ ವೆಬ್ ಸೈಟ್ ನಲ್ಲಿರುವ ಲಿಂಕ್ ಗಳು

ನಮ್ಮ ವೆಬ್ ತಾಣವು ಇತರೆ ಕೆಲವು ಬಾಹ್ಯ ಲಿಂಕ್ ಗಳನ್ನು ಹೊಂದಿದ್ದು ಅವು ನಿಮ್ಮನ್ನು ಇತರೆ ತಾಣಗಳಿಗೆ ಕೊಂಡೊಯ್ಯಬಹುದು. ಅಂತಹ ವೆಬ್ ತಾಣಗಳಿಗೆ ಭೇಟಿ ನೀಡಿದಾಗ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವ ಮುಂಚೆ ಆ ತಾಣಗಳ ಗೌಪ್ಯನೀತಿಯ ಕುರಿತು ಮೊದಲು ಓದಿ ತಿಳಿಯಿರಿ.

ಮಾಹಿತಿ ಹಂಚಿಕೆ

ನಿಮಗೆ ಅತ್ಯುತ್ತಮ ಸೇವೆ ನೀಡಲು ನಿಮ್ಮ ಕೆಲ ವೈಯಕ್ತಿಕ ಮಾಹಿತಿಗಳನ್ನು ನಮ್ಮ ವ್ಯಾಪಾರ ಸಹವರ್ತಿಗಳೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. mBill ತನ್ನ ಎಲ್ಲ ವ್ಯಾಪಾರ ಸಹವರ್ತಿಗಳು ನಮ್ಮ ಗೌಪ್ಯತಾ ನೀತಿಗೆ ಬದ್ಧರಾಗಿದ್ದು ನಿಮ್ಮ ಮಾಹಿತಿಗಳು ದುರುಪಯೋಗವಾಗದಂತೆ ಬಳಸದಿರಲು ಸಮ್ಮತಿಸಿರುತ್ತಾರೆ. ಅಲ್ಲದೆ, mBill ಆಚೆ ಬಾಹ್ಯ ವ್ಯಕ್ತಿಯೊಂದಿಗೂ ನಿಮ್ಮ ಅನುಮತಿಯ ಮೆರೆಗೆ ಮತ್ರ ನಿಮ್ಮ ಮಾಹಿತಿ ಹಂಚಿಕೊಳ್ಳಲಾಗುವುದು. ಕಾನೂನಾತ್ಮಕವಾಗಿ ನಿಮ್ಮ ಮಾಹಿತಿ ನೀಡಬೇಕಾದ ಸಂದರ್ಭಗಳು ಸೃಷ್ಟಿಯಾದರೆ ಅಂತಹ ಸಂದರ್ಭದಲ್ಲೂ ಸ್ಥಳೀಯ ಕಾನೂನು ನಿಭಂದನೆಗೊಳಪಟ್ಟಂತೆ ನಿಮ್ಮ ಮಾಹಿತಿಯನ್ನು ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದು.

ಮಾಹಿತಿ ಸ್ವೀಕೃತಿ

ನಮ್ಮ ಹೊಸ ಉತ್ಪನ್ನಗಳ ಬಿಡುಗಡೆಯ ಸಮ್ದೇಶಗಳು, ಆಫರ್ ಗಳ ಮಾಹಿತಿ ನೀಡುವ ಸಂದೇಶಗಳು, ಇಮೇಲ್ ಗಳು, ಇತರೆ ಸೂಚನೆಗಳು, ನ್ಯೂಸ್ ಲೆಟರ್ ಗಳು ಬೇಡವೆಂದಾದಲ್ಲಿ ಆ ಸೌಲಭ್ಯವನ್ನು ನಿಷ್ಕ್ರೀಯಗೊಳಿಸಿಕೊಳ್ಳಬಹುದು.

ಮಾಹಿತಿ ನವೀಕರಣ

ಬಳಕೆದಾರರು ತಮ್ಮ ಮಾಹಿತಿಗಳನ್ನು ನೋಡಬಹುದು ಹಾಗೂ ಏನಾದರೂ ತಿದ್ದುಪಡಿ ಮಾಡಬೇಕೆಂದಾದದಲ್ಲಿ ಖಾತೆಯನ್ನು ಬಳಸಿ mBill ತಂಡದ ಗ್ರಾಹಕ ಸೇವಾ ಕೇಂದ್ರ ನೆರವು ಪಡೆದು ಹಾಗೆ ಮಾಡಿಕೊಳ್ಳಬಹುದು.

ಸಾಮಾಜಿಕ ವೇದಿಕೆಗಳು

mBill ವೆಬ್ ಸೈಟ್ ಕುರಿತು ಮಾಹಿತಿ ಪಸರಿಸಲು ಬಳಕೆದಾರರು ಬ್ಲಾಗ್ ಮಾಡಬಹುದು. ಇಂತಹ ವೇದಿಕೆಗಳಲ್ಲಿ ಈ ಎಲ್ಲ ಮಾಹಿತಿಗಳು ಲಭ್ಯವಿರುತ್ತದೆ. ಹಾಗಾಗಿ ಬಳಕೆದಾರರು ಇಂತಹ ವೇದಿಕೆಗಳಲ್ಲಿ ತಮ್ಮ ಮಾಹಿತಿಗಳನ್ನು ಹಂಚುವ ಕುರಿತು ಹೆಚ್ಚಿನ ಜಾಗೃತಿವಹಿಸಬೇಕು. ಯಾವುದೇ ಬಳಕೆದಾರ/ಭೇಟಿದಾರ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಂಡಾಗ mBill ಅದಕ್ಕೆ ಹೋಣೆಗಾರ ಆಗಿರುವುದಿಲ್ಲ. ನಮ್ಮ ವೆಬ್ ಸೈಟ್ ನಲ್ಲಿ ಬಳಕೆದಾರ ತಮ್ಮ ಅನುಭವದ ಕುರಿತು ತಿಳಿಸುವಾಗ ವೈಯಕ್ತಿಕ ಮಾಹಿತಿ ಹಂಚಿಕೊಂಡರೆ mBill ಅದಕ್ಕೆ ಜವಾಬ್ದಾರಿಯಾಗಿರುವುದಿಲ್ಲ.

mBill ಅನ್ನು ಗೂಗಲ್ಪ್ಲೇ ಸ್ಟೋರ್ ನಿಂದ ಈಗಲೇ ಡೌನ್ಲೋಡ್ ಮಾಡಿ!

google play store